Souvenir Guidelines for Articles

ನಾವಿಕ ಸ್ಮರಣ ಸಂಚಿಕೆಗೆ ಕನ್ನಡ ಅಭಿಮಾನಿಗಳಿಂದ ಬರಹಗಳ ಆಹ್ವಾನ!!

‘ಸಿಂಚನ, ಸಂಗಮ ಮತ್ತು ಸ್ಪಂದನ’ ಗಳನ್ನು ಬೀಜಮಂತ್ರವನ್ನಾಗಿಟ್ಟುಕೊಂಡು ನಾವಿಕ ಸಂಸ್ಥೆಯು 2009ರಿಂದ ಕನ್ನಡಿಗರನ್ನು ಪ್ರಪಂಚದಾದ್ಯಂತ ಕನ್ನಡಕ್ಕಾಗಿ ಒಗ್ಗೂಡಿಸಿ, ಕನ್ನಡದ ಕಂಪನ್ನು ದೇಶ ವಿದೇಶಗಳಲ್ಲಿ ಪಸರಿಸುತ್ತಿದೆ. ಈ ಬಾರಿ ‘ಕರುನಾಡ ವೈಭವ’ವನ್ನು ಕೇಂದ್ರವಿಷಯವಾಗಿಟ್ಟುಕೊಂಡು ಒಹಾಯೊ ಕನ್ನಡ ಪ್ರೇಮಿಗಳಾದ ನಾವು ನಾವಿಕದ ಐದನೇ ಸಮಾವೇಶವನ್ನು ಆಚರಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ಸ್ಮರಣ ಸಂಚಿಕೆಯ ತಂಡದವರಾದ ನಾವು ಕನ್ನಡ ಜಾಣ ಜಾಣೆಯರಿಂದ ಶ್ರೇಷ್ಟ ಬರಹಗಳನ್ನು ಆಹ್ವಾನಿಸುತ್ತಿದ್ದೇವೆ.

ಅತ್ಯಮೂಲ್ಯ ಬರಹಗಳನ್ನು, ಸಮಾಜದ ಧುರೀಣರ ಸಂದೇಶಗಳನ್ನು, ಸಾಹಿತ್ಯ ಪ್ರಪಂಚದ ದಿಗ್ಗಜರ ಹಾರೈಕೆಗಳನ್ನು, ಸಮ್ಮೇಳನದ ಸವಿನೆನಪುಗಳನ್ನು ಹೊತ್ತು ಬರಲಿರುವ ಈ ಅನರ್ಘ್ಯಮಣಿಗಳ ಭಂಡಾರವು ಮತ್ತಷ್ಟು ಉತ್ಕೃಷ್ಟವಾಗಿ ಹಾಗೂ ಸುಂದರವಾಗಿ ಮೂಡಿ ಬರಲು ನಿಮ್ಮೆಲ್ಲರ ಸಹಾಯ ಮತ್ತು ಸಹಕಾರವನ್ನು ಕೋರುತ್ತೇವೆ. ಈ ಸಂಚಿಕೆಗಾಗಿ ಕನ್ನಡ ಪ್ರೇಮಿಗಳ ಮತ್ತು ಅಭಿಮಾನಿಗಳ ಲೇಖನ, ಪದ್ಯ, ಸಣ್ಣ ಕಥೆ, ಕವನ, ನಗೆ ಚುಟುಕು, ವಿಡಂಬನ ಚಿತ್ರ ಹಾಗೂ ಪ್ರಬಂಧಗಳನ್ನು ಆಹ್ವಾನಿಸುತ್ತಿದ್ದೇವೆ.

ಕನ್ನಡ ಜಾಣ ಜಾಣೆಯರೆ, ನೀವು ಬರೆದು ಕಳುಹಿಸಲಿರುವ ಲೇಖನಗಳು ಕೆಳಗೆ ನೀಡಿರುವ ನಿಯಮಗಳನ್ನು ಪಾಲಿಸುವಂತೆ ಇರಲಿ. ನಿಮ್ಮ ಕಲೆ ಮತ್ತು ಪ್ರತಿಭೆಯನ್ನು ಹಂಚಿಕೊಳ್ಳಲು ಇದೊಂದು ಸದಾವಕಾಶ!

  1. ಲೇಖನಗಳು ಕನ್ನಡದಲ್ಲೇ ಇರಬೇಕು.
  2. ಸಮಾವೇಶದ ಕೇಂದ್ರ ವಿಷಯ ‘ಕರುನಾಡ ವೈಭವ’ದ ಕುರಿತಾದ ಲೇಖನಗಳಿಗೆ ಆದ್ಯತೆ. ಲೇಖನಗಳು ನಾಡ-ಹೊರನಾಡ ಕನ್ನಡಿಗರ/ನಾವಿಕರ ಇತಿಹಾಸ, ನಾಡು, ನುಡಿ, ಸಂಸ್ಕೃತಿ, ಸಾಹಿತ್ಯ, ಸಂಗೀತ ಮತ್ತಿತರ ಜೀವನಾನುಭವದ ಕುರಿತಾಗಿದ್ದರೆ ಉತ್ತಮ. ಇತರ ಉತ್ಕ್ರಷ್ಟ ಬರಹಗಳಿಗೂ ಸುಸ್ವಾಗತ.
  3. ನಿಮ್ಮ ಬರಹಗಳು ಸ್ವಂತವಾಗಿದ್ದು ಬೇರೆ ಯಾವುದೇ ಪತ್ರಿಕೆ, ಪುಸ್ತಕ ಅಥವಾ ಅಂತರ್ಜಾಲದ ತಾಣಗಳಲ್ಲಿ ಪ್ರಕಟವಾಗಿರಬಾರದು.
  4. ಲೇಖನಗಳು ’ಬರಹ’ ಅಥವಾ ‘ನುಡಿ’ ತಂತ್ರಾಂಶವನ್ನು ಬಳಸಿದ್ದು 2000 ಪದಗಳಿಗೆ ಸೀಮಿತವಾಗಿರಬೇಕು (Font Size: 12).
  5. ಮಕ್ಕಳ ಬರಹಗಳನ್ನೂ ಸ್ವೀಕರಿಸಲಾಗುತ್ತದೆ. ಲೇಖನದ ಜೊತೆಗೆ ಮಕ್ಕಳ ವಯಸ್ಸನ್ನೂ ನಮೂದಿಸತಕ್ಕದ್ದು.
  6. ಆಹ್ವಾನಿತ ಲೇಖಕರನ್ನು ಹೊರತುಪಡಿಸಿ ಉಳಿದೆಲ್ಲಾ ಲೇಖಕರು ಸಮ್ಮೇಳನಕ್ಕೆ ನೊಂದಾಯಿಸಿಕೊಂಡಿರಬೇಕು.
  7. ಬರಹಗಾರರ ಹೆಸರು, ವಿಳಾಸ, ಈ-ಮೇಲ್ ಐಡಿ, ಬಣ್ಣದ ಭಾವಚಿತ್ರ (High Resolution: 1200×1200 pixels) ಮತ್ತು ಸಂಕ್ಷಿಪ್ತ ಪರಿಚಯಗಳನ್ನು ಕಳುಹಿಸತಕ್ಕದ್ದು.
  8. ನಿಮ್ಮ ಲೇಖನಗಳನ್ನು souvenir@navika.org, sanchike2019@gmail.com ಈ-ಮೇಲ್ ವಿಳಾಸಗಳಿಗೆ ಕಳುಹಿಸತಕ್ಕದ್ದು.
  9. ಲೇಖನ ಸ್ವೀಕರಿಸುವ ಕೊನೆಯ ದಿನಾಂಕ ಜುಲೈ 15th, 2019.
  10. ಸ್ವೀಕೃತವಾದ ಲೇಖನಗಳನ್ನು ಪ್ರಕಟಿಸುವಲ್ಲಿ ಸ್ಮರಣಸಂಚಿಕೆಯ ಸಂಪಾದಕ ಮಂಡಳಿಯ ನಿರ್ಧಾರವೇ ಅಂತಿಮ.
  11. ಸಂಪಾದಕ ಮಂಡಳಿ ಬರಹಗಳ ಸ್ವೀಕಾರದ ಷರತ್ತುಗಳನ್ನು ಬದಲಾಯಿಸುವ ಹಕ್ಕನ್ನು ಕಾದಿರಿಸಿದೆ.